Jude

ಪೀಠಿಕೆ

1ಯೇಸು ಕ್ರಿಸ್ತನ ಸೇವಕನೂ, ಯಾಕೋಬನ ತಮ್ಮನೂ ಆಗಿರುವ ಯೂದನು ಕರೆಯಲ್ಪಟ್ಟವರಿಗೆ, ತಂದೆಯಾದ
1:1 1 ಥೆಸ. 1:4; 2 ಥೆಸ. 2:13:
ದೇವರಲ್ಲಿ ಪ್ರಿಯರಾದವರಿಗೆ,
1:1 ಯೋಹಾ. 17:11, 15; 1 ಥೆಸ. 5:23:
ಯೇಸು ಕ್ರಿಸ್ತನಿಗಾಗಿ ಕಾಪಾಡಲ್ಪಟ್ಟವರಿಗೆ ಬರೆಯುವುದೇನೆಂದರೆ,
2ನಿಮಗೆ
1:2 2 ಯೋಹಾ. 3:
ಕರುಣೆಯೂ, ಶಾಂತಿಯೂ, ಪ್ರೀತಿಯೂ ಹೆಚ್ಚಾಗಿ ದೊರೆಯಲಿ.

ದುರ್ಬೋಧಕರು

3ಪ್ರಿಯರೇ,
1:3 ತೀತ. 1:4:
ನಮಗೆ
1:3 ಅಥವಾ, ಹಂಚಿಕೊಳ್ಳುವ.
ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು
1:3 1 ತಿಮೊ. 6:12; 2 ತಿಮೊ. 4:7; ಲೂಕ. 13:24; 1 ಕೊರಿ. 9:25; ಫಿಲಿ. 1:27:
ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.
4ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು
1:4 ತೀತ. 1:16; 2 ಪೇತ್ರ. 2:1; 1 ಯೋಹಾ. 2:22:
ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ.
1:4 1 ಪೇತ್ರ. 2:8:
ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.

5ನೀವು ಸಮಸ್ತವನ್ನು ಮೊದಲೇ ತಿಳಿದವರಾಗಿದ್ದರೂ, ನಾನು ಮುಂದಣ ಕೆಲವು ಸಂಗತಿಗಳನ್ನು
1:5 2 ಪೇತ್ರ. 1:12:
ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅವು ಯಾವುದೆಂದರೆ, ಕರ್ತನು ತನ್ನ ಪ್ರಜೆಗಳನ್ನು ಐಗುಪ್ತದೇಶದೊಳಗಿಂದ ರಕ್ಷಿಸಿದರೂ, ತರುವಾಯ
1:5 ಅರಣ್ಯ. 14:29, 37; 26:64, 65; ಕೀರ್ತ. 106:26; ಇಬ್ರಿ. 3:17-19:
ಅವರೊಳಗೆ ನಂಬದೇ ಹೋದವರನ್ನು ನಾಶಮಾಡಿದನು.
6ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ
1:6 2 ಪೇತ್ರ. 2:4. ಪ್ರಕ. 20:2:
ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ.

7
1:7 ಆದಿ. 19:24:
ಸೊದೋಮ್ ಗೊಮೋರ ಪಟ್ಟಣಗಳವರೂ,
1:7 ಆದಿ. 10:19; 14:2, 8; ಧರ್ಮೋ. 29:23; ಹೋಶೇ. 11:8:
ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು,
1:7 2 ಪೇತ್ರ. 2:10. ಸಲಿಂಗಕಾಮಿಗಳಾಗಿದ್ದರು.
ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ.
8ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ.

9ಆದರೂ
1:9 1 ಥೆಸ. 4:16:
ಪ್ರಧಾನ ದೇವದೂತನಾದ
1:9 ದಾನಿ. 10:13; 12:1; ಪ್ರಕ. 12:7:
ಮೀಕಾಯೇಲನು
1:9 ಧರ್ಮೋ. 34:6:
ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ,
1:9 2 ಪೇತ್ರ. 2:11:
ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನ್ನಾಡದೆ,
1:9 ಜೆಕ. 3:2:
<<ಕರ್ತನು ನಿನ್ನನ್ನು ಗದರಿಸಲಿ>> ಎಂದನು.
10ಆದರೆ ಈ ಜನರು
1:10 2 ಪೇತ್ರ. 2:12:
ತಮಗೆ ಗೊತ್ತಿಲ್ಲದವುಗಳ ವಿಷಯವಾಗಿ ದೂಷಿಸುತ್ತಾರೆ ಮತ್ತು ತಾವು ವಿವೇಕಶೂನ್ಯ ಪಶುಗಳಂತೆ ಸ್ವಾಭಾವಿಕವಾಗಿ ಏನೇನನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.
11ಅವರ ಗತಿಯನ್ನು ಏನೆಂದು ಹೇಳಲಿ? ಇವರು
1:11 ಆದಿ. 4:5-8:
ಕಾಯಿನನ ಮಾರ್ಗವನ್ನು ಹಿಡಿದವರೂ, ದ್ರವ್ಯಸಂಪಾದನೆಗೋಸ್ಕರ
1:11 ಅರಣ್ಯ. 31:15, 16; 2 ಪೇತ್ರ. 2:15:
ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಳುಗಿದವರೂ,
1:11 ಅರಣ್ಯ. 16:1-35:
ಕೋರಹನಂತೆ ಎದುರು ಮಾತನಾಡಿ ನಾಶವಾಗಿ ಹೋಗುವವರು ಆಗಿದ್ದಾರೆ.

12ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು,
1:12 ಅಥವಾ, ಕಳಂಕಕ್ಕೆ ಕಾರಣರಾಗಿದ್ದು.
ನಿಮ್ಮ
1:12 2 ಪೇತ್ರ. 2:13:
ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ.
1:12 ಯೆಹೆ. 34:2, 8, 10:
ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು
1:12 ಎಫೆ. 4:14; ಇಬ್ರಿ. 13:9:
ಗಾಳಿಯಿಂದ ಬಡಿಸಿಕೊಂಡು ಹೋಗುವ
1:12 2 ಪೇತ್ರ. 2:17:
ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ,
1:12 ಎರಡು ಸಾರಿ ಸತ್ತ.
ಸಂಪೂರ್ಣವಾಗಿ ಸತ್ತ,
1:12 ಮತ್ತಾ 15:13:
ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು.
13
1:13 ಫಿಲಿ. 3:19:
ಸ್ವಂತ ಅವಮಾನವೆಂಬ ನೊರೆಯನ್ನು ಕಾರುವ
1:13 ಯೆಶಾ. 57:20:
ಸಮುದ್ರದ ಹುಚ್ಚುತೆರೆಗಳೂ ಆಗಿದ್ದಾರೆ. ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ
1:13 2 ಪೇತ್ರ. 2:17:
ಕಗ್ಗತ್ತಲೆಯು ಸದಾಕಾಲಕ್ಕೆ ಇಡಲ್ಪಟ್ಟಿದೆ.

14ಇಂಥವರ ವಿಷಯದಲ್ಲೇ
1:14 ಆದಿ. 5:18:
ಆದಾಮನಿಂದ ಏಳನೆಯ ತಲೆಮಾರಿನವನಾದ ಹನೋಕನು ಸಹ,
1:14 ಧರ್ಮೋ. 33:2; ದಾನಿ. 7:10; ಜೆಕ. 14:5; ಮಾರ್ಕ. 8:38; 1 ಥೆಸ. 3:13; 2 ಥೆಸ. 1:7:
<<ಇಗೋ, ಕರ್ತನು ತನ್ನ ಅಸಂಖ್ಯಾತ ಪರಿಶುದ್ಧರನ್ನು ಕೂಡಿಕೊಂಡು,
15
1:15 2 ಪೇತ್ರ. 2:5:
ಎಲ್ಲರಿಗೂ ನ್ಯಾಯತೀರಿಸುವುದಕ್ಕೂ, ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಹೇಳಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವುದಕ್ಕೆ ಬಂದಿರುವನು>> ಎಂಬುದಾಗಿ ಪ್ರವಾದಿಸಿದನು.

16ಇವರು ಗೊಣಗುಟ್ಟುವವರೂ, ದೂರು ಹೇಳುವವರೂ,
1:16 2 ಪೇತ್ರ. 2:10:
ತಮ್ಮ ದುರಾಶೆಗಳನ್ನನುಸರಿಸಿ ನಡೆಯುವವರೂ,
1:16 2 ಪೇತ್ರ. 2:18:
ಬಂಡಾಯಿಕೊಚ್ಚಿಕೊಳ್ಳುವವರು,
1:16 ಯಾಜ. 19:5; ಧರ್ಮೋ. 10:17:
ಸ್ವಪ್ರಯೋಜನಕ್ಕಾಗಿ ಹೊಗಳಿಕೆಯ ಮಾತುಗಳನ್ನಾಡುವವರು ಆಗಿದ್ದಾರೆ.

ಎಚ್ಚರಿಕೆಗಳೂ ಪ್ರಬೋಧನೆಗಳೂ

17ಪ್ರಿಯರೇ,
1:17 2 ಪೇತ್ರ. 3:2:
ನೀವಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪೊಸ್ತಲರು ಮೊದಲು ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ.
18
1:18 2 ಪೇತ್ರ. 3:3:
<<ಭಕ್ತಿಗೆ ವಿರುದ್ಧವಾದ ತಮ್ಮ ಆಸೆಗಳನ್ನು ಅನುಸರಿಸಿ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರೆಂದು>> ಅವರು ನಿಮಗೆ ಹೇಳಿದರು.
19ಇವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವವರೂ,
1:19 1 ಕೊರಿ. 2:14:
ಪ್ರಾಕೃತ ಮನುಷ್ಯರೂ,
1:19 ರೋಮಾ. 8:9; ಫಿಲಿ. 3:3:
ದೇವರಾತ್ಮ ಇಲ್ಲದವರೂ ಆಗಿದ್ದಾರೆ.

20ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ
1:20 ಕೊಲೊ. 2:7:
ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ,
1:20 ಎಫೆ. 6:18; ರೋಮಾ. 8:26:
ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ.
21
1:21 ತೀತ. 2:13; 2 ಪೇತ್ರ. 3:12:
ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ,
1:21 2 ಕೊರಿ. 13:14; ಅ. ಕೃ. 13:43
ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.

22ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ, 23
1:23 ಆಮೋ. 4:1; ಜೆಕ. 3:2:
ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು
1:23 2 ಕೊರಿ. 5:11:
ಭಯಪಡುತ್ತಾ ಕರುಣಿಸಿರಿ.
1:23 ಪ್ರಕ. 3:4; ಜೆಕ. 3:4:
ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.

ಅಂತ್ಯಾಶೀರ್ವಾದ

24ಮುಗ್ಗರಿಸದಂತೆ
1:24 ಯೋಹಾ. 17:12:
ನಿಮ್ಮನ್ನು ಕಾಪಾಡಿಕೊಳ್ಳುತ್ತಾ,
1:24 ಕೊಲೊ. 1:22; 1 ಪೇತ್ರ. 4:13:
ತನ್ನ ಮಹಿಮೆಯ ಸಮಕ್ಷಮದಲ್ಲಿ ನಿಮ್ಮನ್ನು
1:24 ಎಫೆ. 1:4; 5:27; ಫಿಲಿ. 2, 15; ಪ್ರಕ. 14:5:
ನಿರ್ದೋಷಿಗಳನ್ನಾಗಿ, ಅತ್ಯಂತ ಹರ್ಷದೊಡನೆ ನಿಲ್ಲಿಸುವುದಕ್ಕೂ
1:24 ರೋಮಾ. 16:25; ಎಫೆ. 3:20:
ಶಕ್ತನಾಗಿರುವ,
25ನಮ್ಮ ರಕ್ಷಕನಾದ
1:25 ಯೋಹಾ 5:44; 1 ತಿಮೊ. 1:17:
ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ,
1:25 ರೋಮಾ. 11:36:
ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್.

Copyright information for KanULB